ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಸುಸ್ವಾಗತ


ಶ್ರೀ ಕ್ಷೇತ್ರ ಇಂಚಗೇರಿ ಮಠದ ಸ್ಥಾಪನೆ

   ನವಗಿರಗಳ ನಡುವೆ ನಳನಳಿಸುತ್ತಿರುವ ದೈವ ಭೂಮಿ ಇದು. ಈ ದೈವನ ದರುಶನ ಪಡೆಯಲು ನೂರಾರು ಮೈಲು ಕ್ರಮಿಸಿ ದಣಿದು ಬರುವವರಿಗೆ ನವಗಿರಿಗಳಲ್ಲೊಂದಾದ ಚಕ್ರ ಮಡ್ಡಿ ಎಂಬ ಗಿರಿ ತುದಿಗೆ ತಲುಪುತ್ತಿದ್ದಂತೆ ಮೈಲು ದೂರದಲ್ಲೊಂದು ಮಿನುಗುವ ತಾರೆ ಗೋಚರಿಸುತ್ತದೆ. ಆ ಮಿಣುಕು ಬೆಳಕು ಕಣ್ಸೆಳೆಯುತ್ತಿದ್ದಂತೆ ನೂರಾರು ಮೈಲಿನ ದಣಿವು ಕ್ಷಣಾರ್ಧದಲ್ಲಿ ಹಗುರಾಗುತ್ತದೆ. ಮನಸ್ಸು ಮಲ್ಲಿಗೆಯಾಗುತ್ತದೆ. ಧನ್ಯತಾ ಭಾವ, ಜೈಘೋಷಗಳು ಮೊಳಗುತ್ತವೆ.ಮುಂದಿನ ಪ್ರತಿಯೊಂದುಹೆಜ್ಜೆ ಭಕ್ತಿಯ ರಸದೌತಣ ಉಣಬಡಿಸುತ್ತದೆ, ಹಾಗೇಯೇ ಪುಟ್ಟಗ್ರಾಮವೊಂದನ್ನು ದಾಟಿ ಫರ್ಲಾಂಗ ಕ್ರಮಿಸುತ್ತಿದ್ದಂತೆ ಅಘಾಧವಾದ ಭಕ್ತಿಸಾಗರ ತನ್ನೆಡೆ ಸೆಳೆದೇ ಬಿಡುತ್ತದೆ, ಅದುವೇ ಶ್ರೀ ಕ್ಷೇತ್ರ ಇಂಚಗೇರಿ ಮಠ.

  ಕರ್ನಾಟಕ - ಮಹಾರಾಷ್ಟ್ರ ಗಡಿ ಭಾಗದ ವಿಜಾಪುರ ಜಿಲ್ಲೆ, ಇಂಡಿ ತಾಲ್ಲೂಕಿನಲ್ಲಿರುವ ಈ ಐತಿಹಾಸಿಕ ಶ್ರೀ ಕ್ಷೇತ್ರ ಇಡೀ ದಕ್ಷಿಣ ಭಾರತದ ಶ್ರೇಷ್ಟ ಭಕ್ತಿ ಪಂಥಗಳೊಲ್ಲೊಂದಾಗಿದೆ. ವಿಜಾಪುರ ಜಿಲ್ಲಾ ಕೇಂದ್ರದಿಂದ ಸೋಲ್ಲಾಪುರ ಮಾರ್ಗದಲ್ಲಿ ಸುಮಾರು 30 ಕಿ.ಮೀ. ದೂರದಲ್ಲಿರುವ ಹೊರ್ತಿ ಪಟ್ಟಣದಿಂದ 11 ಕಿ.ಮೀ.ದೂರದಲ್ಲಿರುವ ಈ ಸುಕ್ಷೇತ್ರ ಗುರು ಪರಂಪರೆಯ ವಿಚಾರದಲ್ಲಿ ಶತಮಾನಗಳ ಹಳೆಯ ಇತಿಹಾಸ ಹೊಂದಿದೆ.

   ಶ್ರೀ ಕ್ಷೇತ್ರದ ಗುರು ಪರಂಪರೆಯ ಇತಿಹಾಸ ಸುಮಾರು ಮೂರು ಶತಮಾನಗಳ ಹಳೆಯದಾಗಿದ್ದರೂ ಶ್ರೀ ಕ್ಷೇತ್ರ ಇಂಚಗೇರಿ ಮಠದ ಇತಿಹಾಸ ನಮ್ಮನ್ನು 1800ನೇ ಶತಮಾನದ ಕೊನೆಯ ಅರ್ಧ ಅವಧಿಗೆ ಕೊಂಡೊಯ್ಯುತ್ತದೆ.

                                                                                                      ಮುಂದುವರೆಯುತ್ತದೆ

                                                ಸಂಪರ್ಕಿಸಿ